Thursday 15 November 2012


Story of Carpentry ! 

Carpentry : A skilled-work that we mostly come in close proximity with, when we are constructing a house or want to make furniture, the later most often a bought-over item than hiring a local carpenter. I wonder if this skill has ever been considered as a part of school curriculum. The job and the skill has always been fascinating to see how random blocks of wood are razed, cut and see-sawed to pieces of sizes, designed to customized forms and is thus evolved into a fine finish of a utility product.

I recently met a gentleman, my schoolmate's father, who is a retired public sector employee and is fairly well-settled in life. But as far as his passion for carpentry is concerned, he is till a die-hard addict, continuously in a mental state of creating and improvising, the moment his eyes spots a block of wood, a piece of furniture or an artifact, enthusiastically making a mental note of his observations to be put to use in an upcoming carpentry-venture. Though I have never been associated with carpentry at anytime in my life, the gentleman's devotion, commitment and passion for carpentry did rub off on me to the extent of making my own self feel like a thorough carpenter, enjoying his pride and delight whenever he described his work-peice or when sharing a client-compliment. He plain-heartedly admits that at his present age, he is able to make a wooden stool in a span of a week's time, which he earlier used to make it in a span of just 2-3 days, nevertheless wearing an expression of immense satisfaction to continue to be engaged with his favorite hobby. 

I also enjoyed his nostalgia of how he was denied to take up carpentry by the elders of the house and how he hid and secretly did his first piece of carpentry without the knowledge of his elders. Even today, when I visit my friend's house, who is a niece to the said gentleman, I notice the dining table and the other furniture that he made for them way back in 1975, which still stands sturdy and seems eternally durable.

Can't say for sure, but it did make me observe that carpentry has never been encouraged to take up as a mainstream hobby of skills, especially in the current times. Don't know if it would have really made a significant difference, but I sure wish that as a growing youngster, I was exposed to the historical side of native, traditional and prevailing Carpentry. Nevertheless, I am glad and thankful that I can atleast enjoy and appreciate whatever I come across and cherish what appeals to me as an art and an excellence of human skill.

As a tribute to the above, sharing a couple of videos below ...

1. One is a video from a TED talk by Reuben Margolin, who presents his creation of kinetic wood-sculpting. This video is a sheer tribute to the height a human skill which can excel in presenting what appears to be the most ethereal form of wood art, incorporated with mechanical and motorized base work.

2. (Watch between 1.39 - 4.09) Another video is a clip from the movie 'While you were sleeping'. As a part of the story, the hero hails from a family of furniture-sellers, but wants to break off from the protective traditional family banner and strike out on his own.Just that the topic of carpentry being shared in the above writing, drove me to instantly make a connection with this part of the story in the movie that somewhat strikes a resemblance to the above writing. It struck a chord with my own latent interest and appreciation for carpentry, existing since childhood, but which I must have unconsciously or subconsciously talked myself out of it due to the default common perception that carpentry was just not meant for girls, besides being absolutely clueless about how to even acknowledge with my own self, of the fact that I liked carpentry at an age, even before knowing what the word carpentry stood for.





Thursday 14 June 2012

ತುಂಬಿದ ಕೊಡ.

ಹೊತ್ತಿಗೆ ಸರಿಯಾಗಿ ಬಸ್ ಸ್ಟಾಪ್ ತಲುಪುವ ಆತುರದಲ್ಲಿ ಬಿರುಸಾಗಿ ನಡೆದು ಹೋಗುವ ನನ್ನನ್ನು ತಡೆದು ನಿಲ್ಲಿಸಿದಳೊಬ್ಬ ಹತ್ತೋ ಅಥವ ಹನ್ನೊಂದು ವರುಷದ ಬಾಲಕಿ.

ಆಂಜನೇಯನ ಗುಡಿಯೆದುರಿಗಿರುವ ಬೋರ್ ವೆಲ್ ನೀರನ್ನು ದೊಡ್ಡ ಪ್ಲಾಸ್ಟಿಕ್ ಬಿಂದಿಗೆಯಲ್ಲಿ ತುಂಬಿರಿಸಿ, ದಾರಿಯಲ್ಲಿ ನಡೆದು ಹೋಗುವ ಯಾರಾದರೊಬ್ಬರು ನೀರು ತುಂಬಿರಿಸಿದ ಆ ಬಿಂದಿಗೆಯನ್ನು ಎತ್ತಿ ತನ್ನ ತಲೆಯ ಮೇಲಿರಿಸುವ ಸಹಾಯದ ನಿರೀಕ್ಷೆಯಲ್ಲಿದ್ದಳು. ನಾ ಹತ್ತಿರ ನಡೆದು ಬರುತ್ತಿದ್ದಂತೆಯೇ ಅವಳು,

"ಅಂಟಿ, ಒಸಿ ಈ ಬಿಂದ್ಗೇನ್ ನನ್ ತಲೆಮ್ಯಾಕ್ ಇರ್ಸು" ಅಂದಳು.

ಇಲ್ಲೊಂದು ಸಣ್ಣ ಸಹಾಯ ಮಾಡುವ ಅವಕಾಶಕ್ಕೆ ನಾನು ಮುಂದಾಗುವ ಮುನ್ನವೇ, ಯಾವುದೋ ಸಮ್ಮೋಹಿನಿಗೊಳಗಾದವಳಂತೆ ಯಾಂತ್ರಿಕವಾಗಿ ಅವಳಿಗೆ ಸಹಾಯ ಮಾಡಲು ಮುಂದಾದೆ. ಅನಾಯಾಸವಾಗಿ ಸಹಾಯ ಪಡೆವ ಗತ್ತು ಅವಳ ಧ್ವನಿಯಲ್ಲಿತ್ತು !

 
ಹ್ಯಾಂಡ್ ಬ್ಯಾಗನ್ನು ಬದಿಗಿಟ್ಟು, ತುಂಬಿದ ಬಿಂದಿಗೆಯನ್ನೆತ್ತಲು ಅದರ ಕುತ್ತಿಗೆಗೆ ಕೈ ಹಾಕಿದೆ. ನೀರು ತುಂಬಿದ ಆ ದೊಡ್ಡ ಬಿಂದಿಗೆಯನ್ನು ನಾನೊಬ್ಬಳೇ ಎತ್ತಲಾಗದೆಂದು ಗೊತ್ತಿದ್ದೂ, ಪ್ರಯತ್ನ ಪಡುವ ನನ್ನ ಕೃತ್ಯವು ನಾಟಕೀಯವೆನಿಸಿತು.  ನನಗಿಂತ  ಸಾಕಷ್ಟು ಕಿರಿಯಳಾದ ಆ ಬಾಲಕಿಯ ಎದುರು, ಕೊಡವೆತ್ತುವ ಕಾರ್ಯವನ್ನು ಪ್ರಯತ್ನಿಸಿದ ನಂತರ ಎತ್ತಲಾಗದೆ  ಸೋಲನ್ನೊಪ್ಪಿಕೊಳ್ಳುಲು ನನ್ನ ಮನಸ್ಸಿಗೆ  ಅಭ್ಯಂತರವಿರಲಿಲ್ಲವೇನೋ ...

ನಾ ಅಂದುಕೊಂಡ ಹಾಗೆ  ಆ ಕೊಡವೋ, ಇಟ್ಟ ಜಾಗದಿಂದ ಜಪ್ಪಯ್ಯ ಅಂದರೂ ಕದಲಲಿಲ್ಲ. 

ಆ ಹುಡುಗಿಯ ಮುಖದಲ್ಲಿ, ವಯಸ್ಸಿಗೆ ಸಹಜವಾದ ಮುಗ್ಧತೆ ಯಥೇಚ್ಚವಾಗಿ ಕಾಣುತ್ತಿದ್ದರೂ, ಅವಳ ತೀಕ್ಷ್ಣ ಕಣ್ಣುಗಳು ನಾನು ಮರೆಮಾಚುತ್ತಿದ್ದ ನನ್ನ ಅಸಹಾಯಕ ಸ್ಥಿತಿಯನ್ನು ಕಂಡು ಕೊಂಡವು. ಬಡಕಲಾಗಿ ಕಾಣುತ್ತಿದ್ದ ಪುಟ್ಟ ಕೈಗಳೆರಡು ನನ್ನ ಸಹಾಯಕ್ಕೆ ಬಂದವು.
ಈ ಬಾರಿ ಆ ಭಾರವಾದ ಕೊಡ ತಾನಾಗಿಯೇ ಎದ್ದು ಸಲೀಸಾಗಿ ಅವಳ ಶಿರವೇರಿದಂತಿತ್ತು!
 

ಸತ್ಯನಾರಾಯಣ ಪೂಜೆಯ ವೇಳೆಯಲ್ಲಿ, ದಂಪತಿಗಳಿಬ್ಬರು ಜೊತೆಯಾಗಿ ಆರತಿ ಮಾಡುವಾಗ, ಆರತಿಯ ತಟ್ಟೆ ಹಿಡಿದ ಪತಿಯ ಕೈಯನ್ನು ಪತ್ನಿಯಾದವಳು ಸುಮ್ಮನೆ ಸ್ಪರ್ಶಿಸಿಯೇ ಆರತಿ ಮಾಡುವ ಕಾರ್ಯಕ್ಕೆ ಸಹಭಾಗಿಯಾದಂತೆ, ನನ್ನ ಕೈಗಳೂ ಸಹ ಆ ಕೊಡವನ್ನೆತ್ತುವ ಕಾರ್ಯದಲ್ಲಿ ನೆಪ ಮಾತ್ರಕ್ಕೆ ಸ್ಪರ್ಶ ಮಾಡಿದಂತಿತ್ತು. ನನ್ನ ಕೈಗಳಿಗಾದ ಅವಮಾನವನ್ನು ನನ್ನೊಳಗೇ ಅನುಭವಿಸಿ, ಆದರೇ ಹೊರಗೆ ಮಾತ್ರ ಕಿಂಚಿತ್ ತೋರಿಸಿಕೊಳ್ಳದೆ, ಅವಳ ತಲೆಯ ಮೇಲೆ ಕೊಡವನ್ನು 'ಇಟ್ಟು', "ಜೋಪಾನ" ಅಂತ ಬೇರೆ ದೊಡ್ದಸ್ತಿಕೆತನದ ಕಾಳಜಿಯನ್ನು ತೋರುತ್ತ ಮನಸ್ಸಿಗೆ ಕೊಂಚ ಸಮಾಧಾನ ತಂದು ಕೊಂಡೆ.

ಒದ್ದೆಯಾದ ಕೈಗಳನ್ನು, ದುಪ್ಪಟ್ಟದ ತುದಿಗೆ ಒರೆಸಿಕೊಂಡು, ಬದಿಗಿಟ್ಟಿದ್ದ ಹ್ಯಾಂಡ್ ಬ್ಯಾಗನ್ನು ಹೆಗಲಿಗೆ ತೂಗು ಹಾಕಿಕೊಂಡು ಪುನಃ  ಬಸ್ ಸ್ಟಾಪಿನತ್ತ ಹೆಜ್ಜೆಹಾಕಿದೆ.
 

ಮಣಭಾರದ ಕೊಡವನ್ನು ತಲೆಯ ಮೇಲೆ ಜೋಡಿಸಿಕೊಳ್ಳುತ್ತಲೇ ನನ್ನ ಹಿಂದೆ ಹಿಂಬಾಲಿಸಿ ಬಂದವಳು...
 

"ಎಲ್ ವೋಯ್ತಿದ್ಯಾ ಅಂಟಿ?" ಅಂತ ಕೇಳಿದಳು.

ಹತ್ತೇರಿ ! ಮತ್ತದೇ ಗತ್ತು !!

ಮೊದಲೇ ಪೆಚ್ಚೆನಿಸಿದ್ದ ನನಗೆ, ಅವಳ ಪ್ರಶ್ನೆಯಿಂದ ಮತ್ತಷ್ಟು ಇರುಸು ಮುರುಸಾದೆ. ಕೊಡವನ್ನು ತಲೆಯ ಮೇಲೆ ಇಟ್ಟಾಯಿತಲ್ಲ ! ಇನ್ನೆಂತ ಮಾತು ! ಮನಸಿನಲ್ಲೇ ಗೊಣಗಾಯಿಸಿದೆ.


ಆದರೂ, ಆ ದನಿಯಲ್ಲಿನ ಗತ್ತು ಉತ್ತರವ ಗಿಟ್ಟಿಸಿಕೊಂಡ್ತು.


"ಟ್ಯೂಶನ್ ಕ್ಲಾಸಿನ ಮಕ್ಕಳಿಗೆ ಪಾಠ ಕಲಿಸಲು ಹೋಗ್ತಾ ಇದ್ದೇನೆ" ಎಂದು ಹೇಳಲು ನನ್ನ ಮನಸ್ಸು ಹಿಂದೇಟು ಹಾಕಿತು. ನಾ ಕೊಡುವ ಉತ್ತರ ಅವಳಿಗೆ ಅರ್ಥವಾಗುವುದೋ ಇಲ್ಲವೋ ಎಂಬ ಪ್ರಶ್ನೆಗಿಂತ, ತಲೆಯಮೇಲೆ ತನ್ನ ವಯಸ್ಸಿಗೆ ಮೀರಿದ ಭಾರವನ್ನು ಹೊತ್ತಿರುವ ಅರಿವೇ ಇಲ್ಲದೆ, ಇದೂ ಸಹ ತಾನು ಆಡುವ 'ಮನೆಯ ಆಟದ' ಒಂದು ಭಾಗವೆಂಬಂತೆ ಕಂಡ ಅವಳಿಗೆ, ನಾನು ಟ್ಯೂಶನ್ ಕ್ಲಾಸಿಗೆ ಹೋಗುವ ವಿಷಯ ಅವಳ ಪ್ರಶ್ನೆಗೆ ಬಹಳ ಅಸಹಜವಾದ ಉತ್ತರವೆನಿಸಿತು.


"ಸಿಟಿ ಕಡೆಗೆ ಹೋಗ್ತಾಯಿದೀನಿ" ಅಂತಷ್ಟೇ ಹೇಳಿ ಬೇಗನೆ ಮುಂದೆ ನಡೆದು ಹೋದೆ.


ಕೊಂಚ ದೂರ ಹೋಗಿ ಹಿಂದಿರುಗಿ ನೋಡಿದೆ, ಒಂದು ಕೈಯಲ್ಲಿ ತಲೆಯ ಮೇಲಿನ ಕೊಡವನ್ನು ಹಿಡಿದು ಮತ್ತೊಂದು ಕೈ,  ಅಲ್ಲೇ ಮರಳು ರಾಶಿಯ ಮೇಲೆ ಆಡುತ್ತಿದ್ದ ಬಹುಶ ಮೂರು ವರ್ಷದ ಮಗುವಿನ ಕೈಯನ್ನು ಹಿಡಿದು ದರ ದರನೆ ಎಳೆದುಕೊಂಡೊಯ್ಯುತ್ತಿತ್ತು!

ತುಂಬಿದ ಕೊಡ ತುಳುಕಲ್ಲವಂತೆ  ...ನಿಜ, ಇರಬಹುದು! ಆದರೆ ಇಲ್ಲಿ, ಅಲ್ಲಲ್ಲಿ ತುಸು ತುಳುಕುತ್ತಿದ್ದರೂ, ಅದನ್ನು ಹೊತ್ತ ಆ ಪುಟ್ಟ ಒಡತಿಯ ಪುಟ್ಟ ತಲೆಯ ಮೇಲೆ, ಆ ಪುಟ್ಟ  ಕೈಗಳ ಬಿಗಿ ಹಿಡಿತದಲ್ಲಿ ಭದ್ರವಾಗಿ ಕೂತಿತ್ತೂ, ಆ ತುಂಬಿದ  ಕೊಡ !

Monday 16 April 2012

 ಹರಿದು ಹೋಗಿದ್ದು ರುಪಾಯಿ ನೋಟುಗಳೋ ? ಸಮಯವೋ ? 

ದಿನ ನಿತ್ಯದ ಬಸ್ಸು ಪ್ರಯಾಣದಲ್ಲಿ ಆಗುವ ಘಟನೆಗಳು, ಅದರ ಆಗುಹೋಗುಗಳ ಅನುಭವಗಳು ನಮ್ಮನ್ನು  ಸ್ವಲ್ಪ ಮಟ್ಟಿಗೆ ಸೂಕ್ಷ್ಮಗ್ರಾಹಿಯಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಇಂತಹ ಘಟನೆಗಳು ಲಘು ಮನರಂಜನೆಯೂ ಕೊಡುತ್ತದೆ ಅಂತ ಬೇರೆ ಹೇಳ ಬೇಕಾಗಿಲ್ಲ. 

ಮೊನ್ನೆ ದಿನ ಅನುಭವಕ್ಕೆ ಬಂದ ಒಂದು ಘಟನೆಯನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. 
ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಚಿಲ್ಲರೆ ಪಡೆಯುವ-ಕೊಡುವ ವಿಷಯದಲ್ಲಿ ಆಗುವ 'ಚಿಲ್ಲರೆ' ಜಗಳಕ್ಕೇನು ಕಡಿಮೆಯಿಲ್ಲ. ಇದು ದಿನನಿತ್ಯದ ಕತೆ. ಆದರೆ ಈ ಬಾರಿ ಕಂಡ 'ಚಿಲ್ಲರೆ' ಜಗಳಕ್ಕೆ ವಿಚಿತ್ರವಾದ ಹೊಸ ತಿರುವೊಂದು ಮೂಡಿ ಬಂತು. 

ಹೀಗೊಂದು ಚಿಲ್ಲರೆ ಜಗಳವು ಬಗೆ ಹರೆಯುವ ವರೆಗೂ ಬಸ್ ಡ್ರೈವರ್ ಬಸ್ಸನ್ನು ನಿಂತ ಜಾಗದಿಂದ ಕದಲಿಸದೇ ಹಾಗೆಯೇ ನಿಲ್ಲಿಸಿದ್ದ. ಇಲ್ಲಿ, ಜಗಳವು ಬಗೆ ಹರಿಯದೆ, ವಾಗ್ವಾದ ಮುಂದುವರಿಯುತ್ತಿತ್ತು.  ಹಿಂದಿನ ಸೀಟಿನಲ್ಲಿ ಕುಳಿತ ಹಿರಿಯರೊಬ್ಬರಿಗೆ ಸಿಟ್ಟು ನೆತ್ತಿಗೇರಿಬಿಡ್ತು. ಆದರೆ ಅವರ ಪ್ರತಿಕ್ರಿಯೆ ಬಹಳ ಸೋಜಿಗವಾಗಿತ್ತು. ಅವರು ಕಂಡಕ್ಟರ್ನ್ನು ಬಯ್ದದ್ದಲ್ಲದೆ, ತಮ್ಮ ಜೇಬಿನಿಂದ ಹತ್ತು ರುಪಾಯಿಗಳ ನೋಟುಗಳನ್ನು ತೆಗೆದು, "ಅದ್ಯಾಕೆ ಚಿಲ್ಲರೆ ಕೊಡಕ್ಕೆ ಅಷ್ಟೊಂದು ಜಗಳ ಆಡ್ತಿ ...ತೊಗೋ ಇದನ್ನ ಕೊಟ್ಟು ಮುಗಿಸು ... ಬಸ್ಸನ್ನು  ಹೊರಡಿಸು  ...ಲೇಟ್ ಆಗ್ತಿದೆ ಇಲ್ಲಿ ಎಲ್ರಿಗೂ " ಅಂತ ಹೇಳುತ್ತಾ ಅವನತ್ತ ನೋಟುಗಳನ್ನು ಅಸಹನೆಯಿಂದ ಬಿಸಾಡಿದರು! 

ಅಲ್ಲೇ ನಿಂತ ಹೆಂಗಸೊಬ್ಬರ ಬಳಿ ತೇಲಿ ಬಂದು ಬಿದ್ದವು, ಆ ನೋಟುಗಳು. ಪಾಪ, ಆವಕ್ಕಾದ ಆ ಹೆಂಗಸು, ಬಿದ್ದ ನೋಟುಗಳನ್ನು ಪುನಃ ಆ ಹಿರಿಯ ಮಹಾಶಯರಿಗೆ ಹಿಂದಿರುಗಿಸಿದಾಗ, ಆಕೆಯನ್ನೂ ಬಿಡಲಿಲ್ಲ ಅವರು. 'ಒಮ್ಮೆ ಬಿಸಾಡಿದ ಮೇಲೆ, ಅವನ್ನು ಮುಟ್ಟ ಬಾರದು. ನೀನು ಯಾಕೆ ವಾಪಸ್ಸು ತಂದು ಕೊಟ್ಟೆ ..?" ಅಂತ ಗುಡುಗುತ್ತಾ,  ವಾಪಸ್ಸು ತಮ್ಮ ಕೈ ಸೇರಿದ ಆ ನೋಟುಗಳನ್ನು ಪರ ಪರನೆ ಹರಿದು ಕಿಟಕಿಯಾಚೆ ಎಸದೇ ಬಿಟ್ಟರು !!

ರುಪಾಯೀ ನೋಟುಗಳನ್ನು ಹರಿದು ಹಾಕಿದ ಬಗೆಯನ್ನು ಕಂಡು ದಿಗ್ಭ್ರಮೆಗೊಂಡ ಕಂಡಕ್ಟರ್, ಆ ಹಿರಿಯ ವ್ಯಕ್ತಿಗೆ  ಟಿಕೆಟ್ ಕೊಡಲು ಕೂಡಲೇ ಮುಂದಾದ. ಆದರೆ ಅವರ ಬೈಗುಳ ಮುಂದುವರಿಯುತ್ತಿದ್ದ ಕಾರಣ, ಮೊದಲೇ ತಲೆ ಕೆಡಿಸಿ ಕೊಂಡಿದ್ದ ಅವನು, ಅವರೊಡನೆ ವಾಗ್ವಾದಕ್ಕಿಳಿದ. "ಚಿಲ್ಲರೆ ಕೊಡೋದು ನನ್ನ ಜವಾಬ್ದಾರಿ ..ನಾನೇನು ನಿಮ್ಮ ಹತ್ರ ಚಿಲ್ರೆ ಕೇಳಿದೆನೇ? ....ನೀವ್ಯಾಕೆ ನಿಮ್ಮ ದುಡ್ಡು ಹರಿದುಹಾಕಿ ಬಿಸಾಕಿದ್ರಿ ?" ಅಂದ. ಅಂತು ಆ ಹಿರಿಯರ ಈ ವಿಚಿತ್ರ ವರ್ತನೆಯು, ಜಗಳದಲ್ಲಿ ಮುಳುಗಿ ಹೋಗಿದ್ದ ಕಂಡಕ್ಟರ್ ನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು!
  ನಂತರ ನಾನು ಇದನ್ನು ಬರೆಯುವಾಗ ಅನಿಸಿದ್ದು ಏನೆಂದರೆ "ಚಿಲ್ಲರೆ ಕೊಡಲಾಗದಿದ್ದರು ಪರವಾಗಿಲ್ಲ, ನೋಟು ಹರಿದು ಬಿಸಾಡುವ ಕ್ರಿಯೆ, ಲೊಬೊ ಲೊಬೊ ಅಂತ ಬಾಯಿ ಬಡಿದು ಕೊಳ್ಳುವಷ್ಟು ಸಂಕಟ ಆಗೋದು ಯಾರಿಗಾದರು ಆಗಲಿ, ಅದು ಸಹಜವೇ ... ಅದು ಯಾರದೇ  ರುಪಾಯಿ ನೋಟುಗಳು ಆಗಿರಲಿ !! ಹ ಹ ಹ !! 
ಅದಕ್ಕವರ ಕೋಪ ಮತ್ತಷ್ಟು ಉದ್ರೇಕಗೊಂಡು "ನೀನು ಸರ್ಕಾರಿ ನೌಕರ ...ನಮ್ಮಿಂದ ನೀನು ...ನಿನ್ನಿಂದ ನಾನಲ್ಲ ... ಆಗ್ಲಿಂದ ನೋಡ್ತಾಯಿದೀನಿ, ಎಷ್ಟು ಹೊತ್ತು ಕಾಯ್ಸೋದು ನಮ್ಮನ್ನ ? ಹೌದು ...ಹರಿದು ಹಾಕ್ತೀನಿ ... ಅದರಲ್ಲೇನು..?" ಅಂತ ಧ್ವನಿಯೇರಿಸುತ್ತ, ಮತ್ತೊಂದು ಇಪ್ಪತ್ತು ರುಪಾಯಿ ನೋಟನ್ನು ತಮ್ಮ ಜೇಬಿನಿಂದ ತೆಗೆದು, ಹರಿದು, ಅದೇ ಕಿಟಕಿಯಾಚೆ ಬಿಸಾಡಿದರು! ಆದರೆ ಕಂಡಕ್ಟರ್ ಬಳಿ ಟಿಕೆಟ್ ಪಡೆಯುವಾಗ ತಾವು ತಲುಪ ಬೇಕಾದ ಸ್ಥಳದ ಹೆಸರನ್ನು ಅತ್ಯಂತ ಪ್ರಶಾಂತವಾಗಿ ಹೇಳಿ, ಟಿಕೆಟ್ ಪಡೆದ ನಂತರ ಪುನಃ ಕಂಡಕ್ಟರ್ ಗೆ ಛೀಮಾರಿ ಹಾಕಲಾರಂಭಿಸಿದರು "ನಾನು ಮನಸ್ಸು ಮಾಡಿದರೆ ನಿನಗೆ ಮೆಮೋ ಕೊಡಿಸಬಲ್ಲೆ  ...ನನಗೆ ಹೆಚ್ಚೆಂದರೆ ಅರೆಸ್ಟ್ ವಾರಂಟ್ ಬರ ಬಹುದು ಅಷ್ಟೇ!" (ನೋಟು ಹರಿದು ಹಾಕಿದ್ದಕ್ಕೆ ಅರೆಸ್ಟ್ ವಾರಂಟ್ ಅಂತ ಹೇಳಿರಬಹುದೇ ..???!!) ಎನ್ನುತ್ತಾ ಇನ್ನೂ ಏನೇನೋ ಬೆದರಿಸುತ್ತಿದ್ದರು. ಇವರು ಬಹುಷಃ ವೃತ್ತಿಯಲ್ಲಿ ವಕೀಲರಿರಬಹುದೆಂದು ಊಹಿಸಿದೆ. 
 

ಆದರೂ, ಇಷ್ಟೊಂದು ರೋಚಕವಾದ ಘಟನೆ  ಯಾವುದೋ ಟಿವಿ ಚ್ಯಾನೆಲ್ಲಿನ ಪೂರ್ವಯೋಜಿತವಾದ ರಿಯಾಲಿಟಿ ಷೋ ಇರಬಹುದೇ ಎಂಬ ಶಂಕೆ ನನಗಾಯಿತು. ಕಣ್ಣಗಲಿಸಿ, ಸುತ್ತಲೂ ಒಂದು ಬಾರಿ ಕಣ್ಣು ಹಾಯಿಸಿದೆ, ಎಲ್ಲಾದರೂ, ಯಾರಾದರೂ ಗುಪ್ತ ವಿಡಿಯೋ ಕ್ಯಾಮೆರಾವನ್ನು ಹಿಡಿದು ಶೂಟ್ ಮಾಡುತ್ತಿರುವರೇ ಎಂದು. ಅಂತಹದ್ದು ಏನು ಕಾಣಲಿಲ್ಲ ನನಗೆ. 


ಇವರ ನಡವಳಿಕೆಯಿಂದ ಅಕ್ಕ ಪಕ್ಕದಲ್ಲಿದ್ದವರಿಗೆ ವಿಚಿತ್ರವೆನಿಸಿ ಸ್ವಲ್ಪ ಹೆದರಿಕೆಯೂ ಆಗಿತ್ತು. ಆಗದೇ ಏನು ? ನಮಗೆ ಯಾರಾದರೂ ಪಿಸ್ದು, ಹರಿದು ಹೋಗಿರುವ ಹಳೆಯ ನೋಟನ್ನು ನೀಡಿದರೆ, ಎಂಥಾ ಬೇಜಾರಾಗತ್ತೆ. ಅಂತದ್ದರಲ್ಲಿ, ಇವರು ಮತ್ತಷ್ಟು ಕೆರಳಿದರೆ, ಇನ್ನೆಷ್ಟು ನೋಟುಗಳು ಚಿಂದಿಯಾಗಿ ಮಣ್ಣು ಪಾಲಾಗುತ್ತದೋ ಅಂತ ಹೆದರಿರಬೇಕು, ಅದು ಪರರ ನೋಟೇ ಆಗಿರಲಿ !  ಹ ಹ ಹ ! ಹಾಗಾಗಿ ಕಂಡಕ್ಟರ್ ಗೆ ಸನ್ನೆಯಿಂದಲೇ ಸುಮ್ಮನಾಗಿಸಿದರು. ಮತ್ತೆ ! ಯಾರಾದರೂ ಹಾಗೆ ಮುಲಾಜಿಲ್ಲದೆ ತಮ್ಮ ಜೇಬಿಂದ, ತಮ್ಮದೇ ಆದ ರುಪಾಯಿ ನೋಟುಗಳನ್ನು ಅಷ್ಟು ನಿರ್ದಾಕ್ಷಿಣ್ಯವಾಗಿ ಹರಿದು ಹಾಕಿ ಕಿಟಕಿಯಿಂದ ಬಿಸಾಡಿದ್ದು ಯಾವುದಾದರು ಚಲನ ಚಿತ್ರದಲ್ಲಿ ಕಂಡಿದ್ದರೂ ತಮ್ಮ ನಿಜ ಜೀವನದಲ್ಲಿ  ಕಣ್ಣಾರೆ ಕಂಡಿರಲಾರದ್ದನ್ನು, ಇಂದು ಕಂಡರು ! 
ಹೀಗೆ ..ಹೇಗೋ ಪರಿಸ್ಥಿತಿ ಹತೋಟಿಗೆ ಬಂತು.

ಮೊದಲಿಗೆ ಈ
ಘಟನೆ, ಕೊಂಚ ಕಿರಿಕಿರಿ, ಕೊಂಚ ವಿನೋದ ಅನಿಸಿದರೂ, ನಂತರ ಯೋಚಿಸಿದಾಗ, ಆ ಹಿರಿಯರಿಗೆ ಬಂದ
ಅಸಹನೀಯವಾದ
ಕೋಪ-ಹತಾಶೆ ವಿಪರೀತಕ್ಕೆ ಹೋಗಿದ್ದೂ ಆಶ್ಚರ್ಯವೇನಿಲ್ಲ, ಅದೂ ಅವರ ವಯಸ್ಸಿಗೆ ! ಪಾಪ ಪ್ರಾಯಶಃ ಅವರು ತಮ್ಮ ಜೀವನದಲ್ಲಿ ಸಮಯಕ್ಕೆ ಹೆಚ್ಚು ಒತ್ತುಕೊಟ್ಟ ಜೀವಿಯಾಗಿದ್ದ ಕಾರಣದಿಂದಾಗಿಯೋ ಏನೋ, ಅಥವಾ ಅವರ ಜೀವನದಲ್ಲಿ ಯಥೇಚ್ಚವಾಗಿ ಎಲ್ಲೆಲ್ಲೂ ಕಾಣಬಹುದಾದ ಸಮಯ- ನಷ್ಟದ ಕಹಿ ಅನುಭವಗಳನ್ನು ಸತತವಾಗಿ ಕಂಡು, ರೋಸಿಹೋಗಿ, ಈಗಲೂ ಚಿಲ್ಲರೆ-ಕಾಸಿನ ಕಾರಣದಿಂದಾಗಿ ತಮ್ಮ ಮತ್ತು ಬಹು ಜನರಿಗಾಗಾಗುತ್ತಿದ್ದ  ಸಮಯ ನಷ್ಟದ ವೆಚ್ಚ, ರುಪಾಯಿ ನೋಟುಗಳ ನಷ್ಟಕ್ಕಿಂತ ಹೆಚ್ಚು ಹಾನಿಕರವೆಂದನಿಸಿತೋ ಏನೋ, ಆ ಹಿರಿ-ಜೀವಿಯ ಅಸಹಾಯಕತೆ, ಸಂಕಟವು  ಹೀಗೆ ವ್ಯಕ್ತವಾಯಿತೇನೋ!

ಅಲ್ಲವೇ ಮತ್ತೆ? ರುಪಾಯಿ ನೋಟುಗಳು ಹರಿದು ಹೋಗೋದು ಕಣ್ಣಿಗೆ ಸಾಕ್ಷಾತ್ ಕಾಣಿಸುತ್ತದೆ ಆದರೆ ಸಮಯ ಹರಿದು ಹೋಗಿ ನಷ್ಟವಾಗಿದ್ದು  ಕಣ್ಣಿಗೆ ಸಾಕ್ಷಾತ್ ಕಾಣಿಸೋಲ್ಲ. ಅದು ಅವರವರ ವಯ್ಯಕ್ತಿಕ ಮಟ್ಟದ ಮೌಲ್ಯಮಾಪನಕ್ಕೆ, ಸೂಕ್ಷ್ಮತೆಗೆ ಮತ್ತು ಗ್ರಹಿಕೆಗೆ, ಗೋಚರವಾಗುವಂತದ್ದು ಅನ್ಸತ್ತೆ  ...